Keep your City Clean. We The People Presents "i" a short documentary. We request readers to Join us in "Blog-campaigning" to create CIVIC Awareness. WELL SOMEONE SAID THE WORD “I” IS GREEDY ,WELL IAM GREEDY FOR MY NATION TO GROW,SO ALL YOU I’S JOIN AND MAKE OUR NATION. .

Sunday, June 15, 2008

ಕೊಡಚಾದ್ರಿ ನಾ ಕೊಳಚಾದ್ರಿ ನಾ…? ಯಾಕೆ ಹೀಗೆ???


ನಾನು ಮತ್ತು ನನ್ನ ಸ್ನೇಹಿತರು ತುಂಬಾ ದಿನಗಳಿಂದ ಕೊಡಚಾದ್ರಿಗೆ ಹೋಗ ಬೇಕೆಂದು plan ಮಾಡಿದ್ವಿ…
ಕೊನೆಗೆ ಎಲ್ಲ್ರಿಗು ಅನುಕೂಲವಾಗುವಂತೆ ಮಾರ್ಚ-ಜೂನ್ ೩೦-೨ ರಂದು ಹೋಗಿದ್ವಿ.

೩೦ ರಾತ್ರಿ ೧೦:೫೦ ಕ್ಕೆ ಮಲ್ಲೇಶ್ವರಂ ಬಿಟ್ಟ್ವಿ. ಯಂದಿನಂತೆ ನೆಲಮಂಗಲ ರಸ್ತೆಯಲ್ಲಿ traffic jam ನಲ್ಲಿ ಸಿಕ್ಕ್-ಹಾಕೋಂಡ್ವಿ….ಸುಮಾರು ೪-೪.೫ ಘಂಟೆಗಳ ಕಾಲವಾಯ್ತು ನೆಲಮಂಗಲವನ್ನು ಬಿಡುವುದಕ್ಕೆ…ಮತ್ತೊಂದು ನಮ್ಮ ಪ್ರಯಾಣದ ವಿಷೇಶ ಯೇನಂದ್ರೆ ನಮ್ಮಲ್ಲಿ ಯಾರಿಗೂ route ಗೊತ್ತಿಲ್ಲ ವಾಹನ ಚಾಲಕನಿಗೂ ಸಹ ಗೊತ್ತಿಲ್ಲ ಕೊನೆಗೆ ಹಾಸನದ ಮೇಲೆ ಹೋಗೋಣ ಅಂತ ಹೋರ್ಟ್ವಿ….

ಹಾಸನ ತಲುಪುವಂತೆ ಗಾಡಿ ಪಂಚರ್ರ್.. tyre ಬದಲಾಯಿಸಿ ಪ್ರಯಾಣವನ್ನು ಮುಂದುವರ್ಸಿದ್ವಿ..ಆದ್ರೆ ತಿರ್ಗಾ ಚಿಕ್ಕಮಗಳೂರಿನಲ್ಲಿ ಪುನಃ ಪಂಚರ್ರ್… ಸರಿ ಹಿರೇಬಯಲೂರಿ ನಲ್ಲಿ ಪಂಚರ್ರ್ ಹಾಕ್ಸಿ..ಮುಂದುಹೋರ್ಟ್ವೀ


….ಎಲ್ಲ್ರಿಗೂ ಹೋಟ್ಟೆ ಚುರ್ರ್..ಅನ್ತಿತ್ತು..ಆದ್ರು ಹಾಗೆ ಹೋರ್ಟ್ವೀ…ಅಲ್ಲಿಂದ ಹೋರನಾಡು ಸುಮಾರು ೨೦ ಕಿ.ಮಿ ಇತ್ತು…ಸರಿ ಅಷ್ಟು ದೂರ ಹೋಗಿದಿವಿ ಅನ್ನಪೂರ್ಣೇಶ್ವರಿ ದರ್ಶನವನ್ನು ಮಾಡೋಣ ಅಂತ ಅಲ್ಲಿಗೆ ಹೋಗಿ ಸ್ನಾನ ಮಾಡಿ ದೇವರ ದರ್ಶನವನ್ನು ಮಾಡಿ ದೇವರ ಸಾನಿಧ್ಯದಲ್ಲಿ ಊಟ ಮಾಡಿ..ಕೊಲ್ಲುರಿಗೆ ಹೋರ್ಟ್ವೀ..



ಕೊಲ್ಲೂರಿನಲ್ಲಿ ದೇವರ ದರ್ಶನವನ್ನು ಮಾಡಲು ಸಾಧ್ಯವಾಗಲಿಲ್ಲ..ಅಲ್ಲಿಂದ ಕೊಡಚಾದ್ರಿಗೆ ಹೋದ್ವಿ..ಮೋದಲೇ ಅಲ್ಲಿ PWD Guest House ನಲ್ಲಿ Rajshekar ವ್ಯವಸ್ಥಾಪಕರಿಗೆ ಹೇಳಿದ್ವಿ..ನಾವು ರಾತ್ರಿ ೧ ಘಂಟೆಗೆ ಮೇಲೆ ಹೋದಾಗ..ಆಗ ಅವರು ನಮಗೆ ಊಟವನ್ನು ತಯಾರಿಸಿ ಉಪಚರಿಸಿದರು…ಬಹಳ ಚನ್ನಾಗಿ ಸತ್ಕರಿಸಿದರು….ಅಲ್ಲೆ ಮಲಗಕ್ಕು ವ್ಯವಸ್ಥೆ ಮಾಡಿದ್ದರು…



ಮರುದಿನ ಮುಂಜಾನೆ ೫-ಘಂಟೆಗೆ ಎದ್ದು ಸೂರ್ಯೋದಯ ವನ್ನು ನೋಡಲು ಬೆಟ್ಟವನ್ನು ಹತ್ತಿದ್ವಿ…ಆದ್ರೆ ಮೋಡಭರಿತ ವಾತರವಣದಿಂದ ರವಿಯನ್ನು ನೋಡಲು ಸಾಧ್ಯವಾಗಲಿಲ್ಲ….



ಆದರೆ.. ಕೊಡಚಾದ್ರಿ ಎಲ್ಲರು ಜೀವನದಲ್ಲಿ ಒಂದು ಸಾರಿ ನೋಡಬೇಕು…

ಅಬ್ಬಾ!!! ಸಹ್ಯಾದ್ರಿ ಮಾತೆಯ ಮಡಿಲಲ್ಲಿ ,ಅವರ ಮಕ್ಕಳಂತೆ ಪ್ರಪಂಚದ,ನಮ್ಮ ಜೀವನದ ಎಲ್ಲಾ ಆಗು-ಹೋಗುಗಳು…ಮರೆತು ತಾಯಿಯ ಮಡಿಲಲ್ಲಿ ಮಲಗಿರುವಂತೆ ಇತ್ತು…ಆ ಮೋಡಗಳು-ತಾಯಿಯು ಮಗುವನ್ನು ಅಪ್ಪಿಕೊಂಡು ಮುದ್ದಾಡುವಂತಿತ್ತು..ಅವಳು ಉಟ್ಟಿದ್ದ ಹಸಿರು ಸೀರೆ…ಎಲ್ಲವೂ ವಿಸ್ಮಯವಾಗಿತ್ತು…




ಕೆಲವು ಕ್ಷಣಗಳು ನಾವು ನಮ್ಮನ್ನು ಮರೆತು ಯಾವುದೋ ಲೋಕಕ್ಕೆ ಹೋಗಿದ್ದಿವಿ ಅನಿಸುತಿತ್ತು…..ಯಾಕೋ ನಮ್ಮ ಜೀವನದಲ್ಲಿ ಏನೋ ಕಳೆದು ಕೋಂಡಿದ್ದಿವಿ ಅನಿಸುತಿತ್ತು….ಈಗ ಕೂಡ ದೃಶ್ಯವನ್ನು ನೆನಸ್ಕೋಂಡ್ರೆ ಕಣ್ಣಲ್ಲಿ ಅಳು ಬರುತ್ತೆ…ಅಮ್ಮಾನ ಬಿಟ್ಟು ಬಂದ್ವಿಟ್ಟಿದ್ದಿವಿ ಅನ್ಸತ್ತೆ..:(…..


ಆದ್ರೆ ಬೆಟ್ಟವನ್ನು ಇಲಿಯುವಾಗ ಅಲ್ಲಿ ಒಂದು ಹಲ್ಲ ಇತ್ತು..ಸುಮ್ಮ್ನೆ ಹಾಗೆ ಬಗ್ಗಿ ನೋಡಿದ್ವಿ…



ಅಲ್ಲಿ ನಮ್ಮ ಜನ ಕಸವನ್ನು ತುಂಬ್ಸಿದ್ದ್ರು…chips packet cover,pepsi-cola bottles,water bottle..ಇತ್ಯಾದಿ…ಅದನ್ನು ನೋಡಿದಾಗ ಬಹಳಾ ಬೇಜಾರಾಯ್ತು…ಯಾಕೆ ನಮ್ಮ್ ಜನ ಹೀಗೆ???
ಕೊಡಚಾದ್ರಿಗೆ ಹೋಗುವಂತ ಜನರು ಎಲ್ಲ್ರು ಓದಿರುವವರು..ಓದಿರೊವ್ರೇ ಹೀಗೆ ಮಾಡಿದ್ರೆ..ಹೇಗೆ???
ಸುಮಾರು IT ನಲ್ಲಿ ಕೆಲಸ ಮಾಡೋವ್ರೆ ಅಲ್ಲಿಗೆ ಹೋಗೋದು..ಅವ್ರು ಸಹ ಅವಿದ್ಯಾವಂತರಂತೆ ಆಡ್ತಾರೆ…ಯಾಕೆ??? Company ಇಂದ US,Europe ಅಥವಾ ಬೇರೆ ದೇಶಕ್ಕೆ ಹೋಗಿ ಬಂದ ಮೇಲೆ ಅವರು ಎಲ್ಲ್ರಿಗು ಹೇಳ್ತಾರೆ ,ಅಲ್ಲಿ ತುಂಬಾ clean..roads,busstands…ಆದ್ರೆ ನಮ್ಮೂರಲ್ಲಿ ಮಾತ್ರ ನಾವು ಹೋಗಿದ್ದ್ ಕಡೆಯಲ್ಲಾ chips packet cover,biscuit cover,popcorn..paper..ಎಲ್ಲ ಕಸವನ್ನು road ನಲ್ಲಿ ಹಾಕಿ ಖುಷಿಯಾಗಿ ಮನೆಗೆ ಹೋಗ್ತಿವಿ ಯಾಕೆ??? ಹೋದ ವರ್ಷ ಜೋಗ್ ಗೆ ಹೋಗಿದ್ದೆ ಅಲ್ಲು ಕೂಡ ಹೀಗೆ…ಊಟದ ಎಲೆ,plates,icecream cover…ಯಾಕೆ ನಾವು ಹೀಗೆ? ನಾವು ಬದಲಾಗಲ್ಲ ಅಂತ ನಿರ್ಧರಿಸಿದ್ದಿವೇ????

ಬಹುಷಃ ನಾವು ನಮ್ಮನ್ನೆ ಅಗಾಗ ಈ ಮಾತನ್ನ ಪ್ರಶ್ನಿಸ್ಕೋಂಡ್ರೆ…”ಯಾಕೆ ನಾವು ಹೀಗೆ”????
ನಮ್ಮ ಸಹ್ಯಾದ್ರಿ ಮಾತೆಯನ್ನು ಕಾಪಾಡಿ ಮುಂದಿನ ಪೀಲಿಗೆಗು…ಅವಳನ್ನು ತೋರಿಸಬಹುದು!!!

ಸಿರಿಗನ್ನಡಂ ಗೆಲ್ಗೆ…..
ನಮ್ಮ ನಾಡು ಕರುನಾಡು

ರಾಮನುಜನ್ ಮೇಲ್ಕೋಟೆ
ವಿ ದ ಪೀಪಲ್
We The People

2 comments:

Hari Tirumalai said...

Ri Ramanu, nimdu-namdu yochne onde reethi ansuththe .. namdoo photo collection ide ide thara, nim website-ge henge add maaDodhu?

ramanujan melkote krishna said...

Hey Hari Nice to hear that from you! Please give me your gmail ID so that I can authorise to post the Photos / Articles.